ಅಘನಾಶಿನಿ ನದಿಯು ಕರ್ನಾಟಕ ರಾಜ್ಯದ ಮಲೆನಾಡಿನಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಸಾರ್ವಕಾಲಿಕ ನದಿಯಾಗಿದೆ. ಈ ನದಿಯು ಸಿರ್ಸಿ ನಗರದ ಶಂಕರಹೊಂಡದಿಂದ ಆರಂಭಗೊಂಡು ಕುಮಟಾದ ಅಘನಾಶಿನಿ ಗ್ರಾಮದವರೆಗೂ ಒಟ್ಟು 124 (77 ) ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಅಘನಾಶಿನಿ ನದಿಯು ನಿತ್ಯ ಹರದ್ವರ್ಣ ವನದ ಸಹ್ಯಾದ್ರಿ ಪರ್ವತ ಶ್ರೇಣಿಗಳ ನಡುವೆ ಯಾವುದೇ ಮಾನವ ಚಟುವಟಿಕೆಗಳಿಲ್ಲದೇ ಪವಿತ್ರವಾಗಿ ಹರಿಯುವ ಭಾರತದ ಒಂದು ಪ್ರಮುಖ ನದಿಯಾಗಿದೆ. == ಇವನ್ನೂ ನೋಡಿ == ಸಿರ್ಸಿ ಸಿರ್ಸಿ ತಾಲೂಕು ಉತ್ತರ ಕನ್ನಡ ಪಶ್ಚಿಮ ಘಟ್ಟಗಳು ಮಲೆನಾಡು == ಉಲ್ಲೇಖ ==